Saturday 13 May 2017

QUOTES ON KAMMA VIPAKA ಕರ್ಮಫಲ

               89. ಕರ್ಮಫಲ


1.            ಪೂರ್ವ ಜನ್ಮದಲ್ಲಿ ಜೀವಿಗಳನ್ನು ಕೊಲ್ಲುವುದರಿಂದ ಜನ್ಮದಲ್ಲಿ ಅಲ್ಪಾಯು ಲಭಿಸುತ್ತದೆ. ಜೀವಿಗಳ ಮೇಲಿನ ಕರುಣೆಯಿಂದ ಕೊಲ್ಲದೆ ಇದ್ದರೆ ಜನ್ಮದಲ್ಲಿ ದೀಘರ್ಾಯು ಲಭಿಸುತ್ತದೆ. ಹಾಗೆಯೇ ಜೀವಿಗಳನ್ನು ಹಿಂಸಿಸುವವನು ಜನ್ಮದಲ್ಲಿ ರೋಗ ಗಳನ್ನು ಪಡೆಯುತ್ತಾನೆ. ಹಿಂದಿನ ಜನ್ಮದಲ್ಲಿ ಜೀವಿಗಳನ್ನು ಹಿಂಸಿಸ ದವನು ಆರೋಗ್ಯವುಳ್ಳವನಾಗಿ ಬಲದಿಂದ ಕೂಡಿರುವನು. 448

2.            ಹಿಂದಿನ ಜನ್ಮದಲ್ಲಿ ಜಿಪುಣತನ ಮತ್ತು ಕಳ್ಳತನದಿಂದ ಕೂಡಿದ್ದರೆ ಜನ್ಮದಲ್ಲಿ ಬಡತನ ಸಿಗುತ್ತದೆ. ದಾನವನ್ನು ಹಿಂದಿನ ಜನ್ಮದಲ್ಲಿ ಮಾಡಿದ ಫಲದಿಂದ ಜನ್ಮದಲ್ಲಿ ಶ್ರೀಮಂತನಾಗಿಯೇ ಹುಟ್ಟುತ್ತಾನೆ.   449

3.            ಹಿಂದಿನ ಜನ್ಮದಲ್ಲಿ ದ್ವೇಷಾಸೂಯೆ ಹೊಂದಿರುವವರು ಜನ್ಮದಲ್ಲಿ ಕುರೂಪಿಗಳಾಗಿ ಹುಟ್ಟುವರು. ಸಹನೆ ಮತ್ತು ಕರುಣೆಗಳನ್ನು ಪಾಲಿಸಿರುವವರು ಅತ್ಯಂತ ಸುಂದರವಾಗಿ ಹುಟ್ಟುವರು.      450

4.            ಹಿಂದಿನ ಜನ್ಮದಲ್ಲಿ ಪರರ ಯಶಸ್ಸಿಗೆ, ಭಾಗ್ಯಕ್ಕೆ ಹೊಟ್ಟೆಕಿಚ್ಚು ಪಟ್ಟವರು ಜನ್ಮದಲ್ಲಿ ಅಲ್ಪ ಅನುಯಾಯಿಗಳನ್ನು ಪಡೆಯುತ್ತಾರೆ. ಹಿಂದಿನ ಜನ್ಮದಲ್ಲಿ ಮೈತ್ರಿ ಮತ್ತು ಮುದಿತಾ ಪಾಲಿಸಿರುವವರು ಜನ್ಮದಲ್ಲಿ ಅಪಾರ ಅನುಯಾಯಿಗಳನ್ನು ಪಡೆಯುವರು.               451

5.            ಹಿಂದಿನ ಜನ್ಮದಲ್ಲಿ ಪ್ರಶ್ನಿಸುವುದು, ಚಚರ್ಿಸುವುದು, ವಿಶ್ಲೇಷಿಸುವುದರ ಫಲವಾಗಿ ಜನ್ಮದಲ್ಲಿ ಬುದ್ಧಿವಂತರಾಗಿಯೇ ಹುಟ್ಟುವರು. ಹಿಂದಿನ ಜನ್ಮದಲ್ಲಿ ಅಂತಹುದರಲ್ಲಿ ಸೋಮಾರಿ ಯಾದವರು ದಡ್ಡರಾಗಿ ಹುಟ್ಟುವರು.           452


6.            ಹಿಂದಿನ ಜನ್ಮದಲ್ಲಿ ಅಹಂಕಾರ ಮತ್ತು ವಿನಯರಹಿತತೆಯಿಂದ ಜನ್ಮದಲ್ಲಿ ಗೌರವವಿಲ್ಲದ ಮನೆಗಳಲ್ಲಿ ಹುಟ್ಟುವರು. ಹಾಗೆಯೇ ಹಿಂದಿನ ಜನ್ಮದಲ್ಲಿ ವಿನಯ ಮತ್ತು ಗೌರವದಿಂದ ನಡೆದಿದ್ದರೆ ಗೌರವ ಸಿಗುವಂತಹ ಮನೆಗಳಲ್ಲಿ ಹುಟ್ಟುವರು.       453

No comments:

Post a Comment