66.
ಅವನತಿ
1. ನಿದ್ರೆಯಲ್ಲಿ ಆನಂದಿಸುವಿಕೆ, ಜೊತೆಗಳಲ್ಲಿ ಆನಂದಿಸುವಿಕೆ, ಸೋಮಾರಿಯಾಗಿರುವಿಕೆ, ಮುಂಗೋಪ - ಇವು ಒಬ್ಬನ ಅವನತಿಗೆ
ಕಾರಣಗಳಾಗಿವೆ. 336
2. ಅಪಾರ ಐಶ್ವರ್ಯದಿಂದ ಧನ
ಹಾಗು ಆಹಾರದಿಂದ ಕೂಡಿಯೂ ಒಬ್ಬನೆ ತನ್ನ
ಸಂಪತ್ತನ್ನು ಅನುಭವಿಸುತ್ತಿದ್ದರೆ, ಅದು ಅವನ ಅವನತಿಗೆ
ಕಾರಣವಾಗುತ್ತದೆ. 337
3. ಧಮ್ಮ... ಪ್ರೇಮಿಯು ಉನ್ನತನು
ಮತ್ತು ಧಮ್ಮ ದೂಷಣೆ ಮಾಡುವವ
ಅವನತಿಯುಳ್ಳವನು. 338
4. ಯಾರು ಸಮರ್ಥನಾದರೂ ವೃದ್ಧರಾದ
ತಂದೆ-ತಾಯಿಯರನ್ನು ಸಾಕುವುದಿಲ್ಲವೋ ಅದೇ ಆತನ ಅವನತಿಗೆ
ಕಾರಣ
ವಾಗಿದೆ. 339
5. ಯಾವ ವ್ಯಕ್ತಿ ಸ್ತ್ರೀಯರ
ಹಿಂದೆ ಬಿದ್ದಿರುವನೋ, ಕುಡುಕನೋ ಹಾಗು ಜೂಜುಕೋರನೋ,
ಸಂಪಾದಿಸಿದ ಸರ್ವ ಹಣವನ್ನು ನಷ್ಟ
ಮಾಡಿರುವನೋ ಅದೇ ಆತ ಪರಾಭವದ
ಕಾರಣ
ವಾಗಿದೆ. 340

No comments:
Post a Comment