77.
ನೀಚ
1. ಯಾರು ಮಾನವ, ಪ್ರಾಣಿ
ಹಾಗು ಅಂಡಜಗಳಿಗೆ ಹಿಂಸಿಸು ವನೋ, ಯಾರಿಗೆ
ಪ್ರಾಣಿಗಳ ಬಗೆಗೆ ದಯೆಯೇ ಇಲ್ಲವೋ,
ಆತನನ್ನು ನೀಚನೆಂದು ಭಾವಿಸು. 387
2. ಯಾರು ಗ್ರಾಮಗಳನ್ನು, ಹಳ್ಳಿಗಳನ್ನು
ನಷ್ಟ ಮಾಡುವನೋ ಹಾಗು ಆಕ್ರಮಣ
ಮಾಡುವನೋ, ಯಾರು ಕುಖ್ಯಾತನಾಗಿರುವ ಅತ್ಯಾಚಾರಿಯೋ
ಆತನನ್ನು ನೀಚನೆಂದು ಭಾವಿಸು. 388
3. ಯಾರು ಬಲತ್ಕಾರದಿಂದ ಅಥವಾ
ಪ್ರೇಮದಿಂದ ಸೋದರ ಸಂಬಂಧಿಗಳ ಅಥವಾ
ಮಿತ್ರರ ಸ್ತ್ರೀಯರೊಂದಿಗೆ ಕಾಣುವನೋ ಆತನನ್ನು ನೀಚನೆಂದು
ತಿಳಿದುಕೋ. 389
4. ಯಾರು ಸಹಾ ಜನ್ಮದಿಂದ
ನೀಚರಾಗುವುದಿಲ್ಲ. ಅಥವಾ ಬ್ರಾಹ್ಮಣರೂ ಆಗುವುದಿಲ್ಲ.
ಕರ್ಮದಿಂದಲೇ ನೀಚರೂ ಆಗುತ್ತಾರೆ ಮತ್ತು
ಕರ್ಮದಿಂದಲೇ ಬ್ರಾಹ್ಮಣರು ಆಗುತ್ತಾರೆ. 390

No comments:
Post a Comment