55.
ಪ್ರಿಯವಾದುದು
1. ಕಲಹ, ವಿವಾದ, ವಿಲಾಪ,
ಶೋಕ, ಜಿಪುಣತನ, ಅಹಂ, ಅಭಿಮಾನ ಮತ್ತು
ಚಾಡಿತನ ಇವೆಲ್ಲವೂ ಪ್ರಿಯವಾದುದರಿಂದ ಉತ್ಪನ್ನವಾಗುತ್ತದೆ. ಕಲಹವು ಮತ್ತು ವಿವಾದ
ಸ್ವಾರ್ಥದಿಂದ ಯುಕ್ತವಾಗಿದೆ ಮತ್ತು ವಿವಾದ ಉತ್ಪನ್ನದಿಂದ
ಚಾಡಿತನವು ಆಗುತ್ತದೆ. 280
2. ಲೋಕದಲ್ಲಿ ಯಾವ ಪ್ರಿಯ ಮತ್ತು
ಅಪ್ರಿಯಗಳಿವೆಯೋ ಅದರ ಕಾರಣದಿಂದಲೇ ಇಚ್ಛೆಯು
ಉಂಟಾಗುತ್ತದೆ. 281
3. ಇಂದ್ರಿಯ ವಿಷಯಗಳ ಸ್ಪರ್ಶದಿಂದ
ಸುಖ (ಪ್ರಿಯ) ಮತ್ತು ದುಃಖ
(ಅಪ್ರಿಯ) ವೇದನೆಗಳು ಉಂಟಾಗುತ್ತದೆ. ಸ್ಪರ್ಶ ಇಲ್ಲದಿದ್ದರೆ ಇವು
ಆಗುವುದಿಲ್ಲ. 282
4. ಐದು ರೀತಿಯ ಪ್ರಿಯವಾದ
ಹಾಗು ಮನೋರಮವಾದ ಕಾಮಬೋಗಗಳನ್ನು ತ್ಯಜಿಸಿ ಶ್ರದ್ಧಾಪೂರ್ವಕವಾಗಿ ಅನಿಕೇತನ
ನಾಗಿ ದುಃಖದ ಅಂತ್ಯಮಾಡು. 283

No comments:
Post a Comment