78.
ಮರಣ
1. ಮರಗಳಲ್ಲಿನ ಫಲಗಳಿಗೆ ಬೀಳುವ ಭಯವಿರುವಂತೆ
ಹಾಗೆಯೇ ಜನ್ಮಿಸಿರುವ ಜೀವಿಗಳಿಗೆ ನಿತ್ಯವೂ ಮೃತ್ಯುವಿನ ಭಯವಿರುತ್ತದೆ.
2. ಹೇಗೆ ಕುಂಬಾರನಿಂದ ಸಿದ್ಧವಾಗಿರುವ
ಮಣ್ಣಿನ ಪಾತ್ರೆಗಳು ಚೂರಾಗುವ ಸ್ವಭಾವವುಳ್ಳದ್ದಾಗಿದೆಯೋ ಹಾಗೆಯೇ ಜೀವಿಗಳ
ಜೀವನವು ಇದೆ. 392
3. ಈ ರೀತಿಯಿಂದ ಲೋಕವು
ಮೃತ್ಯು ಹಾಗು ವೃದ್ಧಾಪ್ಯದಿಂದ ಪೀಡಿತವಾಗಿದೆ.
ಆದ್ದರಿಂದ ಧೀರಪುರುಷರು ಲೋಕದ ಸ್ವಭಾವ ಅರಿತು
ಶೋಕಪಡುವುದಿಲ್ಲ. 393
4. ವಿಲಾಪಿಸುವುದರಿಂದ ಅಲ್ಪವು ಪ್ರಯೋಜನವಾಗುವ ಹಾಗಿದ್ದರೆ
ಬುದ್ಧಿವಂತ ವ್ಯಕ್ತಿಯು ಹಾಗೆಯೇ ತನಗೆ ನೋವುಂಟು
ಮಾಡಿಕೊಳ್ಳಲಿ. ಆದರೆ ಹಾಗೆ ಆಗದಿರುವಾಗ
ಶೋಕಿಸದಿರಲಿ, ಅದು ನಿರರ್ಥಕ. 394

No comments:
Post a Comment