59.
ಪಾಪ
1. ಪಾಪವನ್ನು ಅದು ನನಗೆ ತಟ್ಟುವುದಿಲ್ಲ
ಎಂದು ಅಲ್ಪವೆಂದು ಭಾವಿಸಬೇಡ. ಹೇಗೆ ಮಡಿಕೆಯು ಹನಿಗಳಿಂದ
ತುಂಬಿಕೊಳ್ಳು ತ್ತದೆಯೋ ಹಾಗೆಯೇ ಪಾಪಿಯು
ತನ್ನನ್ನು ಪಾಪದಿಂದ ತುಂಬಿಕೊಳ್ಳುತ್ತಾನೆ. 300
2. ಪ್ರತಿಯೊಂದು ಪಾಪವು ಮಾಡುವವನಿಗೆ ಹೆಚ್ಚು
ನೋವನ್ನು ಕೊಡುತ್ತದೆಯೇ ಹೊರತು ನಿರಪರಾಧಿಗೆ ಅಲ್ಲ. 301
3. ಮೂರ್ಖನು ತಾನು ಪಾಪವನ್ನು
ಮಾಡುವಾಗ ಅದನ್ನು ಮಧುವಿನಷ್ಟೇ ಸಿಹಿ
ಎಂದು ಭಾವಿಸುತ್ತಾನೆ. ಆದರೆ ಅದರ ಫಲ
ಅನುಭವಿಸುವಾಗ ದುಃಖಕ್ಕೆ ಒಳಗಾಗಿ ದುಃಖವೆಂದು ಅರಿಯುತ್ತಾನೆ. 302
4. ಕಬ್ಬಿಣದಲ್ಲಿ ಹುಟ್ಟುವ ತುಕ್ಕು ಅದನ್ನೇ
ತಿನ್ನುವಂತೆ ಪಾಪಿಯನ್ನು ಪಾಪವು ದುರ್ಗತಿಗೆ ತಳ್ಳುತ್ತದೆ. 303

No comments:
Post a Comment