52.
ಜೂಜು
1. ಜೂಜಾಡುವವನು ಈ ರೀತಿಯ ಅಪಾಯಗಳನ್ನು
ಪಡೆಯುತ್ತಾನೆ : ಗೆದ್ದವನು ದ್ವೇಷಗಳಿಗೆ ಗುರಿಯಾಗುತ್ತಾನೆ, ಸೋತವನು ಧನ ಹಾನಿಯಿಂದ
ದುಃಖಿತನಾಗುತ್ತಾನೆ. ಧನಹಾನಿ, ಆತನ ಮಾತಿಗೆ
ಮೌಲ್ಯವಿಲ್ಲದಂತಾಗುತ್ತದೆ. ಆತನು ಮಿತ್ರ-ಬಂಧುಗಳಿಂದ
ತಿರಸ್ಕಾರಕ್ಕೆ ಗುರಿಯಾಗುತ್ತಾನೆ. ಆತನಿಗೆ ವಿವಾಹವಾಗಲು ಹೆಣ್ಣನ್ನು
ಯಾರೂ ನೀಡುವುದಿಲ್ಲ ಮತ್ತು ಆತನು ಹೆಂಡತಿಯನ್ನು
ಸಾಕಲು ಆಗದವನು ಆಗುತ್ತಾನೆ. 268
2. ಯಾರು ಜೂಜಾಟದಲ್ಲಿ ಆನಂದಿಸುತ್ತಾನೋ,
ಕುಡಿತದಲ್ಲೆ ತಲ್ಲೀನನೋ, ವ್ಯಭಿಚಾರ ನಿರತನೋ, ಅಸಭ್ಯರ ಸಂಗ
ಸೇರುವನೋ, ಜ್ಞಾನಿಗಳನ್ನು ಸೇರುವುದಿಲ್ಲವೋ ಅಂತಹವನ ಐಶ್ವರ್ಯ ಕ್ಷೀಣಿಸುತ್ತದೆ. 269
3. ಯಾರು ಜೂಜಾಟದಲ್ಲಿ ತನ್ನ
ಸರ್ವಸ್ವ ಧನವನ್ನು ಕಳೆದು ಕೊಳ್ಳುವನೋ
ಅದು ಅಲ್ಪ ಹಾನಿ ಆಗಿದೆ.
ಆದರೆ ಎಲ್ಲಕ್ಕಿಂತ ದೊಡ್ಡ ಹಾನಿ ತಥಾಗತರ
ಬಗ್ಗೆ ಮನವನ್ನು ದೂಷಿತ ಮಾಡುವುದಾಗಿದೆ. 270
4. ಯಾವ ವ್ಯಕ್ತಿ ಸ್ತ್ರೀಯರ
ಹಿಂದೆ ಬಿದ್ದಿರುವನೋ, ಕುಡುಕನೋ, ಹಾಗು ಜೂಜುಕೋರನೋ ಸಂಪಾದಿಸಿದ
ಸರ್ವಧನವನ್ನು ನಷ್ಟ ಮಾಡಿರುವನೋ ಅದೇ
ಆತನ ಅವನತಿಯ ಕಾರಣ
ವಾಗಿದೆ.
271

No comments:
Post a Comment