43.
ಆರೋಗ್ಯ
1. ಆರೋಗ್ಯವು ಪರಮ ಲಾಭ. 225
2. ಎರಡು ಪ್ರಕಾರದ ರೋಗಗಳಿವೆ,
ಅವುಗಳೆಂದರೆ : ಶಾರೀರಿಕ ರೋಗ ಮತ್ತು
ಮಾನಸಿಕ ರೋಗ. ಶಾರೀರಿಕ
ರೋಗದಿಂದ ಮುಕ್ತರಾಗಲು ಒಂದು ವರ್ಷ, ಅಥವಾ
2 ವರ್ಷ, ನೂರು ವರ್ಷಗಳಿಂದಲೂ ಹೆಚ್ಚು
ಕಾಲಕ್ಕೂ ರೋಗದಿಂದ ಮುಕ್ತರಾಗಲು ಆನಂದಿಸುತ್ತಾರೆ.
ಆದರೆ ಮಾನಸಿಕ ಕ್ಲೇಷಗಳ ಮುಕ್ತರ
ಹೊರತು ಅನ್ಯರು ಮಾನಸಿಕ ರೋಗದಿಂದ
ಮುಕ್ತರಾಗಲು ಒಂದು ಕ್ಷಣವೂ ಸಹ
ಆನಂದಿಸುವುದಿಲ್ಲ. 226
3. ಲೋಭ, ದ್ವೇಷ ಮತ್ತು
ಮೋಹ ಈ ಮೂರು ರೋಗದ
ಮುಖ್ಯ ಪ್ರತಿನಿಧಿಗಳಾಗಿವೆ. 227
4. ಯಾರು ಸ್ನೇಹಿತರನ್ನು ನಂಬದವನೋ,
ಅಸ್ಥಿರ ಚಿತ್ತನೋ ಮತ್ತು ಮಿತ್ರರಲ್ಲಿ
ಕೆಟ್ಟದಾಗಿ ವತರ್ಿಸುವನೋ, ಆತನ ಆರೋಗ್ಯ ಚೆನ್ನಾಗಿರುವುದಿಲ್ಲ. 228
5. ರೋಗವನ್ನು (ಜನ್ಮ) ಮುಂಚೆಯೆ ತಡೆಯುವುದು
ನಿವಾರಣೆಗಿಂತ ಉತ್ತಮವಾದುದು. 229
6. ಶರೀರವು ರೋಗಕ್ಕೆ ಗುರಿಯಾದಾಗ
ಮನಸ್ಸನ್ನು ದುರ್ಬಲ ಗೊಳಿಸದಿರಿ. 230

No comments:
Post a Comment