31.
ದೃಢನಿಧರ್ಾರ
1. ಯಾರು ದೃಢತೆಯಿಂದ ಪರಿಶ್ರಮ
ಪಡುವರೋ ಅವರು ಮಿತ್ರರನ್ನು, ಸೌಭಾಗ್ಯವನ್ನು,
ಖ್ಯಾತಿಯನ್ನು ಮತ್ತು ಸುಖವನ್ನು ಗಳಿಸುವರು. 163
2. ಹೇಗೆ ಸಮುದ್ರ ಮಧ್ಯದಲ್ಲಿ
ಅಲೆಯು ಏಳಲಾರದೋ, ಸ್ಥಿರತೆ ಸ್ಥಾಪಿತವಾಗಿರುತ್ತದೆಯೋ ಹಾಗೆಯೇ ಸ್ಥಿರತೆ,
ಚಂಚಲ ರಹಿತತೆಯುಳ್ಳ ಭಿಕ್ಷು ತೃಷ್ಣೆಯನ್ನು ಮಾಡದಿರಲಿ. 164
3. ಯಾರು ಭೂಮಿಯ ಹಾಗೆ
ವಿರೋಧವಿಲ್ಲದವನೋ, ಯಾರು ಇಂದ್ರಕೀಲದ ಹಾಗೆ
ದೃಢನೋ, ಯಾರು ಕೆಸರಿಲ್ಲದ ಆಳದ
ತಿಳಿಗೊಳದಂತೆ ಪರಿಶುದ್ಧನೋ ಅಂತಹವನಿಗೆ ಮುಂದಿನ ಸಂಸಾರವಿಲ್ಲ. 165
4. ಯಾರು ಸಂಪೂರ್ಣವಾಗಿ ಸ್ವಗರ್ಿಯ,
ಮಾನವೀಯ ಮತ್ತು ಬ್ರಹ್ಮಲೋಕವನ್ನು ಗೆದ್ದು,
ಸರ್ವಲೋಕಗಳ ಬಂಧನದಿಂದ ಮುಕ್ತನೋ, ಅಂತಹ ಸ್ಥಿರ ಹಾಗು
ಸ್ಥಿತಾಚಿತ್ತನೇ ಕ್ಷೇತ್ರಜಿತ ನಾಗಿದ್ದಾನೆ. 166

No comments:
Post a Comment