Saturday, 13 May 2017

QUOTES ON KAMMA VIPAKA ಕರ್ಮಫಲ

               89. ಕರ್ಮಫಲ


1.            ಪೂರ್ವ ಜನ್ಮದಲ್ಲಿ ಜೀವಿಗಳನ್ನು ಕೊಲ್ಲುವುದರಿಂದ ಜನ್ಮದಲ್ಲಿ ಅಲ್ಪಾಯು ಲಭಿಸುತ್ತದೆ. ಜೀವಿಗಳ ಮೇಲಿನ ಕರುಣೆಯಿಂದ ಕೊಲ್ಲದೆ ಇದ್ದರೆ ಜನ್ಮದಲ್ಲಿ ದೀಘರ್ಾಯು ಲಭಿಸುತ್ತದೆ. ಹಾಗೆಯೇ ಜೀವಿಗಳನ್ನು ಹಿಂಸಿಸುವವನು ಜನ್ಮದಲ್ಲಿ ರೋಗ ಗಳನ್ನು ಪಡೆಯುತ್ತಾನೆ. ಹಿಂದಿನ ಜನ್ಮದಲ್ಲಿ ಜೀವಿಗಳನ್ನು ಹಿಂಸಿಸ ದವನು ಆರೋಗ್ಯವುಳ್ಳವನಾಗಿ ಬಲದಿಂದ ಕೂಡಿರುವನು. 448

2.            ಹಿಂದಿನ ಜನ್ಮದಲ್ಲಿ ಜಿಪುಣತನ ಮತ್ತು ಕಳ್ಳತನದಿಂದ ಕೂಡಿದ್ದರೆ ಜನ್ಮದಲ್ಲಿ ಬಡತನ ಸಿಗುತ್ತದೆ. ದಾನವನ್ನು ಹಿಂದಿನ ಜನ್ಮದಲ್ಲಿ ಮಾಡಿದ ಫಲದಿಂದ ಜನ್ಮದಲ್ಲಿ ಶ್ರೀಮಂತನಾಗಿಯೇ ಹುಟ್ಟುತ್ತಾನೆ.   449

3.            ಹಿಂದಿನ ಜನ್ಮದಲ್ಲಿ ದ್ವೇಷಾಸೂಯೆ ಹೊಂದಿರುವವರು ಜನ್ಮದಲ್ಲಿ ಕುರೂಪಿಗಳಾಗಿ ಹುಟ್ಟುವರು. ಸಹನೆ ಮತ್ತು ಕರುಣೆಗಳನ್ನು ಪಾಲಿಸಿರುವವರು ಅತ್ಯಂತ ಸುಂದರವಾಗಿ ಹುಟ್ಟುವರು.      450

4.            ಹಿಂದಿನ ಜನ್ಮದಲ್ಲಿ ಪರರ ಯಶಸ್ಸಿಗೆ, ಭಾಗ್ಯಕ್ಕೆ ಹೊಟ್ಟೆಕಿಚ್ಚು ಪಟ್ಟವರು ಜನ್ಮದಲ್ಲಿ ಅಲ್ಪ ಅನುಯಾಯಿಗಳನ್ನು ಪಡೆಯುತ್ತಾರೆ. ಹಿಂದಿನ ಜನ್ಮದಲ್ಲಿ ಮೈತ್ರಿ ಮತ್ತು ಮುದಿತಾ ಪಾಲಿಸಿರುವವರು ಜನ್ಮದಲ್ಲಿ ಅಪಾರ ಅನುಯಾಯಿಗಳನ್ನು ಪಡೆಯುವರು.               451

5.            ಹಿಂದಿನ ಜನ್ಮದಲ್ಲಿ ಪ್ರಶ್ನಿಸುವುದು, ಚಚರ್ಿಸುವುದು, ವಿಶ್ಲೇಷಿಸುವುದರ ಫಲವಾಗಿ ಜನ್ಮದಲ್ಲಿ ಬುದ್ಧಿವಂತರಾಗಿಯೇ ಹುಟ್ಟುವರು. ಹಿಂದಿನ ಜನ್ಮದಲ್ಲಿ ಅಂತಹುದರಲ್ಲಿ ಸೋಮಾರಿ ಯಾದವರು ದಡ್ಡರಾಗಿ ಹುಟ್ಟುವರು.           452


6.            ಹಿಂದಿನ ಜನ್ಮದಲ್ಲಿ ಅಹಂಕಾರ ಮತ್ತು ವಿನಯರಹಿತತೆಯಿಂದ ಜನ್ಮದಲ್ಲಿ ಗೌರವವಿಲ್ಲದ ಮನೆಗಳಲ್ಲಿ ಹುಟ್ಟುವರು. ಹಾಗೆಯೇ ಹಿಂದಿನ ಜನ್ಮದಲ್ಲಿ ವಿನಯ ಮತ್ತು ಗೌರವದಿಂದ ನಡೆದಿದ್ದರೆ ಗೌರವ ಸಿಗುವಂತಹ ಮನೆಗಳಲ್ಲಿ ಹುಟ್ಟುವರು.       453

QUOTES ON CONSCIOUSNESS ಚಿತ್ತ

             88. ಚಿತ್ತ
1.            ಚಿತ್ತವು (ಮನಸ್ಸು) ಸ್ವಾಭಾವಿಕವಾಗಿ ಪರಿಶುದ್ಧವಾದದ್ದು. ಹಾಗು ಪರಿಶುಭ್ರವಾದುದು. ಆದರೆ ಬಾಹ್ಯ ವಿಷಯಗಳಿಂದ ಮಲೀನವಾಗುತ್ತದೆ. ಹಾಗು ಇಂದ್ರಿಯಗಳ ಪ್ರಭಾವ ಮತ್ತು ಮಾನಸಿಕ ಅಂಗಾಂಗಗಳಿಂದ ಮಲಿನವಾಗುತ್ತದೆ. 443
2.            ಮನೋವೇಗದಷ್ಟು ಕ್ಷೀಪ್ರವಾಗಿ ಮತ್ತೆ ಯಾವುದೂ ವೇಗ ಹೊಂದಿಲ್ಲ. ಮನಸ್ಸು ಎಷ್ಟು ಬೇಗ ಉದಯಿಸಿ ಅಳಿಯುವುದು, ಅದನ್ನು ಹೊಲಿಸಲು ಅಷ್ಟು ಸುಲಭವಲ್ಲ.             444
3.            ಕೆಟ್ಟ ಛಾವಣಿಯುಳ್ಳ ಮನೆಯಲ್ಲಿ ಮಳೆಯ ನೀರು ನುಗ್ಗುವಂತೆ ಅಭಿವೃದ್ಧಿ ಹೊಂದಿದ ಮನಸ್ಸಿನಲ್ಲಿ ಕಲ್ಮಶ (ರಾಗ)ಗಳು ನುಗ್ಗುತ್ತವೆ.
4.            ಶತ್ರುವಿಗಿಂತ ಹೆಚ್ಚು ಹಾನಿ, ಕೆಟ್ಟ ಮಾರ್ಗದಶರ್ಿತ ಮನಸ್ಸು ಮಾಡುತ್ತದೆ. ಮಾತಾಪಿತ ಮಿತ್ರನಿಗಿಂತ ಹೆಚ್ಚು ಲಾಭ ಸುಮಾರ್ಗದಶರ್ಿತ ಮನಸ್ಸು ಮಾಡುತ್ತದೆ.            446
5.            ದೃಢ ಮನಸ್ಸಿಗೆ ದುಃಖವಿಲ್ಲ. ಮನಸ್ಸನ್ನು ಜಯಿಸಿದವರು ಮೃತ್ಯುವನ್ನು ಜಯಿಸುತ್ತಾರೆ.         447


1.            ಚಿತ್ತವು (ಮನಸ್ಸು) ಸ್ವಾಭಾವಿಕವಾಗಿ ಪರಿಶುದ್ಧವಾದದ್ದು. ಹಾಗು ಪರಿಶುಭ್ರವಾದುದು. ಆದರೆ ಬಾಹ್ಯ ವಿಷಯಗಳಿಂದ ಮಲೀನವಾಗುತ್ತದೆ. ಹಾಗು ಇಂದ್ರಿಯಗಳ ಪ್ರಭಾವ ಮತ್ತು ಮಾನಸಿಕ ಅಂಗಾಂಗಗಳಿಂದ ಮಲಿನವಾಗುತ್ತದೆ. 443

2.            ಮನೋವೇಗದಷ್ಟು ಕ್ಷೀಪ್ರವಾಗಿ ಮತ್ತೆ ಯಾವುದೂ ವೇಗ ಹೊಂದಿಲ್ಲ. ಮನಸ್ಸು ಎಷ್ಟು ಬೇಗ ಉದಯಿಸಿ ಅಳಿಯುವುದು, ಅದನ್ನು ಹೊಲಿಸಲು ಅಷ್ಟು ಸುಲಭವಲ್ಲ.             444

3.            ಕೆಟ್ಟ ಛಾವಣಿಯುಳ್ಳ ಮನೆಯಲ್ಲಿ ಮಳೆಯ ನೀರು ನುಗ್ಗುವಂತೆ ಅಭಿವೃದ್ಧಿ ಹೊಂದಿದ ಮನಸ್ಸಿನಲ್ಲಿ ಕಲ್ಮಶ (ರಾಗ)ಗಳು ನುಗ್ಗುತ್ತವೆ.445

4.            ಶತ್ರುವಿಗಿಂತ ಹೆಚ್ಚು ಹಾನಿ, ಕೆಟ್ಟ ಮಾರ್ಗದಶರ್ಿತ ಮನಸ್ಸು ಮಾಡುತ್ತದೆ. ಮಾತಾಪಿತ ಮಿತ್ರನಿಗಿಂತ ಹೆಚ್ಚು ಲಾಭ ಸುಮಾರ್ಗದಶರ್ಿತ ಮನಸ್ಸು ಮಾಡುತ್ತದೆ.            446


5.            ದೃಢ ಮನಸ್ಸಿಗೆ ದುಃಖವಿಲ್ಲ. ಮನಸ್ಸನ್ನು ಜಯಿಸಿದವರು ಮೃತ್ಯುವನ್ನು ಜಯಿಸುತ್ತಾರೆ.         447

QUOTES ON MEDITATION ಝಾನ (ಧ್ಯಾನ)

          87. ಝಾನ (ಧ್ಯಾನ)


1.            ಮನಸ್ಸಿನ ಏಕತೆಯೇ ಸಮಾಧಿ. ನಾಲ್ಕು ಸ್ಮೃತಿ ಪಟ್ಠಾನವೇ ಅವುಗಳ ಧ್ಯಾನ ವಿಷಯವಾಗಿದೆ. ನಾಲ್ಕು ಸಮ್ಯಕ್ ಪ್ರಯತ್ನಗಳೇ ಅದರ ಸಲಕರಣೆಗಳು, ಇವು ನಿರಂತರ ಅಭ್ಯಾಸದ ವೃದ್ಧಿಯೇ ಸಮಾಧಿ ವೃದ್ಧಿ.437

2.            ನಾಲು ವಿಧದ ಧ್ಯಾನಗಳಿವೆ : ಜೀವನದಲ್ಲೇ ಸುಖ ಲಭಿಸುವಂತಹುದು. ಜ್ಞಾನ ಮತ್ತು ದರ್ಶನವನ್ನು ನೀಡು ವಂತಹದು. ಜಾಗರೂಕತೆಯನ್ನು ಸ್ಥಾಪಿಸುವಂತಹುದು ಮತ್ತು ಅಸವವನ್ನು ನಾಶಪಡಿಸುವಂತಹದು.         438

3.            ಮೈತ್ರಿಯ ಧ್ಯಾನವನ್ನು ಅಭಿವೃದ್ಧಿಗೊಳಿಸು. ಇದರಿಂದಾಗಿ, ದ್ವೇಷವು ಅಂತ್ಯವಾಗುತ್ತದೆ. ಕರುಣಾ ಧ್ಯಾನವನ್ನು ಅಭಿವೃದ್ಧಿಗೊಳಿಸು. ಇದರಿಂದಾಗಿ ಕ್ರೌರ್ಯವು ಅಂತ್ಯವಾಗುತ್ತದೆ. ಮುದಿತಾ ಧ್ಯಾನವನ್ನು ಅಭಿವೃದ್ಧಿಗೊಳಿಸು ಇದರಿಂದಾಗಿ ಅಸೂಯೆ ಅಂತ್ಯವಾಗುತ್ತದೆ. ಉಪೇಕ್ಖಾ ಧ್ಯಾನವನ್ನು ಅಭಿವೃದ್ಧಿಗೊಳಿಸು ಇದರಿಂದಾಗಿ ಪ್ರಿಯ ಅಪ್ರಿಯ ಭಾವ ಅಂತ್ಯವಾಗುತ್ತದೆ. ಅಶುಭಾ ಧ್ಯಾನವನ್ನು ಅಭಿವೃದ್ಧಿಗೊಳಿಸು ಇದರಿಂದಾಗಿ ಸುಂದರತೆಯ ಭಾವ ಅಂತ್ಯವಾಗುತ್ತದೆ. ಅನಿತ್ಯ ಧ್ಯಾನವನ್ನು ಅಭಿವೃದ್ಧಿಗೊಳಿಸು ಇದರಿಂದಾಗಿ ನಾನು ಎಂಬ ಅಹಂ ಅಂತ್ಯವಾಗುತ್ತದೆ. ಅನಾಪಾನಾಸತಿ ಧ್ಯಾನವನ್ನು ಅಭಿವೃದ್ಧಿಗೊಳಿಸು ಇದರಿಂದಾಗಿ ಮಹತ್ಫಲ ದೊರೆಯುತ್ತದೆ, ಅತ್ಯಂತ ಲಾಭ ಸಿಗುತ್ತದೆ.440

4.            ನೋಡುವಾಗ ನೋಡುವುದರಲ್ಲಿ ಮಾತ್ರ ತಲ್ಲೀನನಾಗು. ಕೇಳುವಾಗ ಕೇಳುವುದರಲ್ಲಿ ಮಾತ್ರ ತಲ್ಲೀನನಾಗು. ಇಂದ್ರಿಯಗಳನ್ನು ಅನುಭವಿಸುವಾಗ ಅನುಭವಿಸುವುದರಲ್ಲಿ ಮಾತ್ರ ತಲ್ಲೀನನಾಗು. ಅರಿಯುವಾಗ ಅರಿಯುವುದರಲ್ಲಿ ಮಾತ್ರ ತಲ್ಲೀನನಾಗು.                440

5.            ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಸಮಾಹಿತವಾದ ಚಿತ್ತ ಪಡೆದವ ಯಥಾಭೂತವಾಗಿ ಅರಿಯುತ್ತಾನೆ.             441


6.            ಪ್ರಶಾಂತತೆ ಬೆಳೆಸಿದಾಗ, ಮನಸ್ಸು ಅಭಿವೃದ್ಧಿಯಾಗುತ್ತದೆ. ಆಗ ಲೋಭವು ನಶಿಸುತ್ತದೆ. ಪ್ರಜ್ಞಾವು ಬೆಳೆಸಿದಾಗ ಸಮ್ಮದೃಷ್ಟಿಯು ಅಭಿವೃದ್ಧಿಯಾಗುತ್ತದೆ, ಆಗ ಮೋಹವು ನಶಿಸುತ್ತದೆ.               442

QUOTES ON SELF-DEPENDENCE ಸ್ವ-ಅವಲಂಬನೆ

           86. ಸ್ವ-ಅವಲಂಬನೆ


1.            ನಿಮಗೆ ನೀವೇ ದೀಪವಾಗಿ, ನಿಮಗೆ ನೀವೇ ಆಶ್ರಯದಾತರಾಗಿ ಅಥವಾ ಶ್ರೇಷ್ಠ ಜ್ಞಾನ (ಧಮ್ಮ)ವನ್ನು ನಿಮ್ಮ ದೀಪವನ್ನಾಗಿ ಮಾಡಿಕೊಳ್ಳಿ. ಅದನ್ನು ನಿಮ್ಮ ಆಸರೆಯನ್ನಾಗಿಸಿ ಬೇರೆ ಯಾವ ಶರಣು ಬೇಡ.           431

2.            ಪರರಲ್ಲಿ ಅವಲಂಬಿತರಾಗಬೇಡಿ, ನಿಮ್ಮ ಸ್ವ-ಶ್ರದ್ಧೆಯನ್ನು ಅಭಿವೃದ್ಧಿಗೊಳಿಸಿ.         432

3.            ಯಾರು ತನ್ನನ್ನು ಸಮರ್ಥ ಎಂದು ಭಾವಿಸುತ್ತಾನೋ ಆತನು ಸಾಮಥ್ಯವುಳ್ಳವನೇ ಸರಿ.      433

4.            ನಿಮಗೆ ನೀವೇ ನಾಯಕರು, ಬೇರ್ಯಾರಿದ್ದಾರೆ! ನಿಮ್ಮನ್ನು ಧಮಿಸಿ ನಿಮ್ಮನ್ನು ಅನ್ವೇಷಿಸಿ.   434

5.            ನಿಮಗೆ ನೀವೇ ಶ್ರಮಿಸಬೇಕು.                435


6.            ಒಬ್ಬನಿಗೆ ಆತನೇ ಆಶ್ರಯವಾಗಬಲ್ಲ, ಬೇರ್ಯಾವುದು ಆಶ್ರಯವಿರಬಲ್ಲದು?         436

QUOTES ON DOUBT ಸಂಶಯ

          85. ಸಂಶಯ

1.            ಸಂಶಯದಷ್ಟು ಭಯಾನಕ ಚಟ ಇನ್ನೊಂದಿಲ್ಲ. ಸಂಶಯವು ಜನರನ್ನು ಬೇರ್ಪಡಿಸುತ್ತದೆ. ಸಂಶಯವು ಮುಳ್ಳಿನಂತೆ ಘಾತಿಸುತ್ತಲೇ ಇರುತ್ತದೆ. ಸಂಶಯವು ಖಡ್ಗದಂತೆ ಸಾಯಿಸುತ್ತದೆ. ಸಂಶಯವು ವಿಷದಂತೆ ಮಿತ್ರತ್ವವನ್ನು ಹಾಳು ಮಾಡಿ ಸಂಬಂಧಗಳನ್ನು ಹರಿದು ಹಾಕುತ್ತದೆ. 427
2.            ಯಾರು ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ ವಿನಯದಲ್ಲಿ ಸಂಶಯಪಡುತ್ತಾನೋ ಆತನು ಶ್ರದ್ಧೆಯಿಡುವುದಿಲ್ಲ. ಆತನು ಸಿಟ್ಟಿಗೇಳುತ್ತಾನೆ. ಅಸಂತುಷ್ಟನಾಗಿರುತ್ತಾನೆ. ದ್ವೇಷಿಸುವ ಮನಸ್ಸನ್ನು ಉಳ್ಳವನಾಗಿರುತ್ತಾನೆ, ಮೊಂಡನಾಗಿರುತ್ತಾನೆ. ಅಂತಹವರು ರಾಗದಿಂದ ಕೂಡಿರುತ್ತಾರೆ. ಅವರು ಧಮ್ಮದಲ್ಲಿ ಏಳಿಗೆ ಹೊಂದುವುದಿಲ್ಲ.         428
3.            ಯಾರಿಗೆ ಬಂಧನವು ಇಲ್ಲವೋ, ಯಾರು ಪೂರ್ಣ ಪ್ರಜ್ಞೆಯಿಂದಾಗಿ ಎಲ್ಲಾ ಸಂಶಯಗಳನ್ನು ಇಲ್ಲವಾಗಿಸಿ ಕೊಂಡಿರುವರೋ ಮತ್ತು ಅಮರತ್ವವನ್ನು ಸಿದ್ಧಿಸಲು ಸಿದ್ಧನೋ ಆತನನ್ನು ನಾನು ಬ್ರಾಹ್ಮಣ (ಶ್ರೇಷ್ಠ) ಎನ್ನುತ್ತೇನೆ.  429

4.            ಇಲ್ಲಿಯದನ್ನು ಕುರಿತ, ಮುಂದಿನದನ್ನು ಕುರಿತ ಯಾವ ಸಂಶಯಗಳಿವೆಯೋ ತಾನೇ ಅರಿತಿರುವುದಾಗಲಿ ಅಥವಾ ಪರರಿಗೆ ತಿಳಿದವುಗಳಾಗಲಿ, ಅವೆಲ್ಲವನ್ನು ಧ್ಯಾನಿಗಳಾದವರು ಪರಿಹರಿಸಿ ತೊರೆಯುತ್ತಾರೆ. ಶ್ರದ್ಧೆಯಿಂದ ಬ್ರಹ್ಮಚರ್ಯ ಜೀವನ ಪಾಲಿಸುತ್ತಾರೆ.             430

QUOTES OF COMBINATION ಮಿಶ್ರಣ

         84. ಮಿಶ್ರಣ


1.            ಅಸಹಿಷ್ಣುಗಳಲ್ಲಿ ಕ್ಷಾಂತಿಶೀಲನೂ, ಕ್ರೂರಿಗಳಲ್ಲಿ ಸಾಧುವು ಮತ್ತು ಲೋಭಿಗಳಲ್ಲಿ ವಿರಾಗಿಯಾಗಲಿ.       420

2.            ರಾಗದಂತಹ ಬೆಂಕಿಯಿಲ್ಲ. ದ್ವೇಷದಂತಹ ಹಿಡಿತವಿಲ್ಲ, ಮೋಹದಂತಹ ಬಲೆಯಿಲ್ಲ, ತೃಷ್ಣೆಯಂತಹ ನದಿಯಿಲ್ಲ. 421

3.            ಧ್ಯಾನದಿಂದ ಆನಂದ ಮತ್ತು ಶಾಂತತೆಗಳು ಉದಯಿಸುತ್ತವೆ. ಬಯಕೆಗಳಿಂದ ನಿರಾಶೆ ಮತ್ತು ಚಿಂತೆಗಳು ಉದಯಿಸುತ್ತವೆ.422

4.            ಹೇಳಿದ್ದೆಲ್ಲವನ್ನು ಕೇಳು, ಮುಖ್ಯವಾದುದನ್ನು ಹಿಡಿದಿಟ್ಟುಕೋ ಅರ್ಹವಾದುದನ್ನು ನುಡಿ, ಆದರೆ ಯಾವುದಕ್ಕೂ ಅಂಟಬೇಡ.423

5.            ಕೋಪದ ನುಡಿಯು ಹರಿತವಾದ ಕತ್ತಿಯಂತೆ, ದುರಾಸೆಯು ಮರಣಾಂತಿಕ ವಿಷವಾಗಿದೆ. ದ್ವೇಷವು ಭಯಂಕರ ಬೆಂಕಿಯಾಗಿದೆ ಮತ್ತು ಮೋಹವು ಕಡುಕತ್ತಲೆಯಾಗಿದೆ.              424

6.            ದಾನವೇ ಮಹಾ ಲಾಭವಾಗಿದೆ, ಕೃತಜ್ಞತೆಯಿಲ್ಲದೆ ಪಡೆಯುವುದು ಮಹಾ ನಷ್ಟವಾಗಿದೆ. ಸಹನೆಯೇ ಶ್ರೇಷ್ಠ ರಕ್ಷಾಕವಚವಾಗಿದೆ. ಶ್ರೇಷ್ಠ ಆಯುಧವೆಂದರೆ ಪ್ರಜ್ಞಾ ಆಗಿದೆ.425

7.            ಅಕುಶಲ ಯೋಚನೆಗಳು ಮಹಾ ಡಕಾಯಿತವಾಗಿದೆ. ಶೀಲವೇ ಶ್ರೇಷ್ಠ ಐಶ್ವರ್ಯನಿಧಿಯಾಗಿದೆ. ಅಜ್ಞಾನದಿಂದ ಪ್ರಪಂಚವು ಹಾಳಾಗುತ್ತದೆ. ಸ್ವಾರ್ಥ ಅಸೂಯೆಯಿಂದ ಸ್ನೇಹ ಮುರಿಯುತ್ತದೆ. ದ್ವೇಷವೇ ಪ್ರಬಲ ಜ್ವರವಾಗಿದೆ. ಬುದ್ಧರೇ ಶ್ರೇಷ್ಠ ವೈದ್ಯರಾಗಿ

ದ್ದಾರೆ.     426

QUOTES ON POPULARITY ಜನಪ್ರಿಯತೆ

      83. ಜನಪ್ರಿಯತೆ

1.            ಯಾರು ಧಮ್ಮಕ್ಕೆ ಅನುಗುಣವಾಗಿ ನಡೆಯುವರೋ, ಸಮ್ಮ ದೃಷ್ಟಿಯುಳ್ಳವರೋ, ಸತ್ಯವಂತರೋ ಮತ್ತು ಕರ್ತವ್ಯಕ್ಕೆ ಅನುಸಾರವಾಗಿ ಪರಿಶ್ರಮಪಡುವರೋ ಅವರು ಜನರಿಗೆ ಪ್ರಿಯರಾಗುವರು.     414

2.            ಬೋಧಿಸುವವರು, ಸಲಹೆ ನೀಡುವವರು ಮತ್ತು ಪಾಪದಿಂದ ದೂರವಿರಲು ಒತ್ತಾಯಿಸುವವರು ಸತ್ಪುರುಷರಿಗೆ ಪ್ರಿಯ ರಾಗುವರು ಮತ್ತು ಅಸತ್ಪುರುಷರಿಗೆ ಅಪ್ರಿಯರಾಗುವರು. 415

3.            ಕೆಲಸ ನನ್ನಿಂದಾಯಿತು, ಪ್ರತಿಕಾರ್ಯ ಸಣ್ಣದು ಅಥವಾ ಶ್ರೇಷ್ಠದ್ದು ನನ್ನಿಂದಾಯಿತು ಎಂದು ಗೃಹಸ್ಥರು ಮತ್ತು ಪಬ್ಬಜಿತರು ಭಾವಿಸಲಿ. ಇಂತಹ ಅಭಿಲಾಶೆಯು ಮುರ್ಖನದ್ದಾಗಿರುತ್ತದೆ. ಇದರಿಂದ ಆತನು ಬಯಕೆಗಳು ಮತ್ತು ಅಹಂಕಾರ ಹೆಚ್ಚಾಗುತ್ತಿರುತ್ತದೆ.   416

4.            ಯಾರ ಇಂದ್ರಿಯಗಳು ಶಾಂತವಾಗಿವೆಯೋ, ಸಾರಥಿಯಿಂದ ಪಳಗಿಸಲ್ಪಟ್ಟ ಉತ್ತಮಾಶ್ವಗಳಂತೆ ಯಾರ ಅಹಂಕಾರವು ನಾಶವಾಗಿದೆಯೋ, ಅಸವಗಳಿಂದ ಮುಕ್ತರೋ, ಅಂತಹನಿಗೆ ದೇವತೆಗಳೂ ಸಹಾ ಪ್ರಿಯರೆಂದು ಭಾವಿಸುವರು.  417

5.            ಯಾರು ಶೀಲದಲ್ಲಿ, ದರ್ಶನದಲ್ಲಿ ಸಂಪನ್ನರೋ, ಧಮ್ಮದಲ್ಲಿ ಸುಸ್ಥಾಪಿತರೋ, ಸತ್ಯಗಳನ್ನು ಸಾಕ್ಷಾತ್ಕರಿಸಿರುವರೋ ಮತ್ತು ಯಾರು ತಮ್ಮ ಕರ್ತವ್ಯಗಳನ್ನು ಪೂರೈಸಿರುವರೋ ಅಂತಹವರನ್ನು ಜನರು ಪ್ರಿಯರೆಂದು ಭಾವಿಸುವರು.    418


6.            ಯಾರು ಶ್ರದ್ಧಾಶೀಲ ಸಂಪನ್ನರೋ, ಯಶಸ್ಸನ್ನು ಮತ್ತು ಭೋಗ ಸಂಪತ್ತನ್ನು ಯಾರು ಉಳ್ಳವನಾಗಿದ್ದಾನೋ ಆತ ಎಲ್ಲೆಲ್ಲಿಯೇ ಹೋಗಲಿ, ಅಲ್ಲೆಲ್ಲಾ ಗೌರವ ಪಡೆಯುತ್ತಾನೆ, ಪೂಜಿತನಾಗುತ್ತಾನೆ.419