94. ಏಕಾಂತಜೀವನ
1. ಒಂಟಿಯಾಗಿ ವಾಸಿಸಿ, ಏಕಾಂತದಲ್ಲಿ ಆನಂದಿಸಿ,
ಅಂತರಂಗ ದಲ್ಲಿ ಶಾಂತಿಯಿರಲಿ, ಚಿತ್ತವು
ಸಮತೆಯಿಂದಿರಲಿ, ಧ್ಯಾನದ ಬಗ್ಗೆ ಅಲಕ್ಷ್ಯ
ಮಾಡಬೇಡಿ. 474
2. ಏಕಾಕಿಯಾಗಿ ಓಡಾಡುವ ಏಕಾಕಿಯಾಗಿ ಮಲಗುವ,
ತನ್ನನ್ನು ತಾನೇ ಧಮಿಸಿಕೊಳ್ಳುವ, ಏಕಾಕಿಯು
ವನವಾಸದಿಂದ ಆನಂದಗೊಳ್ಳುತ್ತಾನೆ. 475
3. ಧಮ್ಮವನ್ನು ಕೇಳಿ ಅದರ ಅರ್ಥವನ್ನು
ತಿಳಿದು ಆನಂದ ಪಡೆದ ಏಕಾಂಗಿಯು
ಸುಖವಾಗಿರುತ್ತಾನೆ. ಪ್ರಾಣಿಗಳ ಬಗೆಗೆ ಸಂಯಮದಿಂದಿದ್ದು, ವೈರರಹಿತನಾಗಿ,
ರಾಗರಹಿತನಾಗಿ ಯಾರು ತಾನು ತನ್ನದು
ಎಂಬ ಭಾವನೆಯನ್ನು ತೊರೆದಿರುವನೋ ಅವನೇ ಪರಮ ಸುಖಿಯಾಗುತ್ತಾನೆ. 476
4. ಬುದ್ಧ ಭಗವಾನರ ಆ
ಸತ್ಯವನ್ನು ಆಲಿಸು. ಗುಂಪಿನಲ್ಲಿರುವವನಿಗೆ ಪೂರ್ಣ
ವಿಮುಕ್ತಿ ಅಸಂಭವ, ಅದನ್ನು ಅರಿತು
ಖಡ್ಗ ಮೃಗದ ರೀತಿ ಏಕಾಂಗಿಯಾಗಿ
ಸಂಚರಿಸು. 477

No comments:
Post a Comment